ಈಗಾಗಲೇ ಎರಡು ಚಿತ್ರಗಳ ಮಾಲಾಶ್ರೀ ಅಭಿನಯದ ವೀರ ಚಿರಂಜೀವಿ ಸರ್ಜಾ ಅಭಿನಯದ ಗಂಡೆದೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ರಾಮು ಈಗ ಮತ್ತೊಂದು ಚಿತ್ರದ ಚಿತ್ರೀಕರಣ ಆರಂಭಿಸಲು ಸಜ್ಜಾಗಿದ್ದಾರೆ.
ರಾಮು ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ಮತ್ತೊಂದು ಅದ್ದೂರಿ ಚಿತ್ರ ಕಂಠೀರವ ಆರಂಭಿಸಲಿದ್ದು, ಈ ಚಿತ್ರವು ಮಾರ್ಚ್ನಲ್ಲಿ ಆರಂಭವಾಗಲಿದೆ.
ದಾಸರಿ ಸೀನು ಛಾಯಾಗ್ರಹಣ, ದೀಪು ಎಸ್. ಇಉಮಾರ್ ಸಂಕಲನ ವಿರುವ ಈ ಚಿತ್ರದ ಸಂಭಾಷಣೆ ಮತ್ತು ನಿರ್ದೇಶನ ತುಷಾರ್ ರಂಗನಾಥ್.
ವಿಜಯ್ ಜೋಡಿಯಾಗಿ ರಿಷಿಕಾ (ರೋಹಿಣಿ) ಎಸ್.ವಿ. ರಾಜೇಂದ್ರಸಿಂಗ್ ಬಾಬುರವರ ಪುತ್ರಿ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲಿದ್ದು, ದಿ: ಸಂಕರ್ಸಿಂಗ್ರ ಮೂರನೇ ತಲೆಮಾರಿನ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶಿಸಿದಂತಾಗುತ್ತದೆ. ಇವರೊಂದಿಗೆ ಶುಭಾಪೂಜಾ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ.
ದಿನಾಂಕ: ೧೭.೦೨.೨೦೧೦.
ರಿಷಿಕಾ ಬಯೋಡೇಟಾ
ಹೆಸರು : ರಿಷಿಕಾ
ಮೂಲ ಹೆಸರು : ರೋಹಿಣಿ
ವಯಸ್ಸು : ೨೦ ವರ್ಷ
ವಿದ್ಯಾಭ್ಯಾಸ : ಬಿ.ಎಸ್ಸಿ (ಫ್ಯಾಷನ್ ಡಿಸೈನ್)
ಮೌಂಟ್ ಕಾರ್ಮಲ್ ಕಾಲೇಜ್,
ತಂದೆ ಹೆಸರು : ಎಸ್.ವಿ. ರಾಜೇಂದ್ರಸಿಂಗ್ಬಾಬು
ಹೆಸರಾಂತ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ
ವಿಜೇತ ನಿರ್ದೇಶಕರು.
ತಾಯಿಯ ಹೆಸರು : ಅನುರಾಧ ಸಿಂಗ್ (ಗೃಹಿಣಿ)
ಸಹೋದರ : ಆದಿತ್ಯ, (ನಾಯಕನಟ)
ವಿವರ : ನಿರ್ದೇಶಕ-ನಿರ್ಮಾಪಕ, ದಿ: ಶಂಕರ್ ಸಿಂಗ್ ಹಾಗೂ
ಹಿರಿಯ ನಟಿ ಪ್ರತಿಮಾ ದೇವಿ ಪುತ್ರ ಎಸ್.ವಿ. ರಾಜೇಂದ್ರ
ಸಿಂಗ್ ಬಾಬು ರವರ ಪುತ್ರಿ. ಅತ್ತೆ ವಿಜಯಲಕ್ಷ್ಮಿ ಸಿಂಗ್ ಕೂಡ ನಟಿಯಾಗಿ - ನಿರ್ಮಾಪಕಿಯಾಗಿ, ಕಾಸ್ಟ್ಯೂಮ್ ಡಿಸೈನರ್ಆಗಿ, ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿನಯಕ್ಕೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಮುಂಬೈನ ಕಿಶೋರ್ ನಮಿತ್ಕಪೂರ್ ಶಾಲೆಯಲ್ಲಿ ಆರು ತಿಂಗಳ ತರಬೇತಿಯನ್ನು ಪಡೆದಿರುತ್ತಾರೆ.
ನಿರ್ಮಾಪಕ ರಾಮುರವರ ವಿಜಯ್ ಅಭಿನಯದ ಕಂಠೀರವ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ.